ಪರಮಾರಾಧ್ಯ ದೀಕ್ಷಾಗುರುದೇವನ
ಮಹದರುವಿನ ಕೊನೆಯ ಮೊನೆಯಲ್ಲಿರುವ
ಪರಂಜ್ಯೋತಿಯೆ ಎನಗೆ ಜನನಸ್ಥಲ.
ಶಿಕ್ಷಾಗುರುದೇವನ ಮಹಾಜ್ಞಾನದ ಬೆಳಗಿನ ತಿಳುಹಿನ ನಿಳಯದ
ಪರಮ ಸುಧಾಬ್ಧಿಯೊಳ್ ಎನಗೆ ಸ್ಥಿತಿಯ ಭೋಗಸ್ಥಲ.
ಮೋಕ್ಷಾಗುರುದೇವನ ಪರಮಾನುಭಾವದ
ಚಿದಾನಂದಮಹಾಪ್ರಕಾಶದ ಮೂಲಪ್ರಣಮಾಲಯವೆ
ಎನಗೆ ಲಯಸ್ಥಾನದ ಮಹಾಮನೆಯ ಐಕ್ಯಸ್ಥಲವೆಂದು
ಭಾವಭರಿತವಾಗಿ ಇಹಪರಂಗಳೆಡೆಯಾಟವ ನೆರೆ ನೀಗಿ,
ಬಚ್ಚಬರಿಯಾನಂದ ನಿತ್ಯಮುಕ್ತಿಸ್ವರೂಪವದೆಂತೆಂದೊಡೆ:
ಹರನಿರೂಪ ಸಾಕ್ಷಿ:
“ತಥೈವ ಶಿವಸಂಗಿನಾಂ ಜನನಂ ಗುರುಲಿಂಗಕಂ|
ಚರಲಿಂಗವಿಹಾರಾಚ್ಚವಿನಾಶೋ ಲಿಂಗಜಂಗಮಂ||
ಸದ್ಗುರೊಃಪಾಣಿಜಾತಸ್ಯ ಸ್ಥಿತಿಂ ಸದ್ಭಕ್ತಸಂಗಿನಾಂ|
ಲೀಯತೇ ಚ ಮಹಾಲಿಂಗೇ ವೀರಶೈವೋತ್ತಮಸ್ಮೃತಃ||”
ಎಂದುದಾಗಿ,
ನಿಜವೀರಶೈವೋತ್ತಮ ಷಟ್ಸ್ಥಲಬ್ರಹ್ಮಿಗಳಿಗೆ
ಮರಣಸೂತಕವೆಂಬುದೆ ಪಾತಕ ಕಾಣಾ
ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.
Art
Manuscript
Music
Courtesy:
Transliteration
Paramārādhya dīkṣāgurudēvana
mahadaruvina koneya moneyalliruva
paran̄jyōtiye enage jananasthala.
Śikṣāgurudēvana mahājñānada beḷagina tiḷuhina niḷayada
parama sudhābdhiyoḷ enage sthitiya bhōgasthala.
Mōkṣāgurudēvana paramānubhāvada
cidānandamahāprakāśada mūlapraṇamālayave
enage layasthānada mahāmaneya aikyasthalavendu
bhāvabharitavāgi ihaparaṅgaḷeḍeyāṭava nere nīgi,
baccabariyānanda nityamuktisvarūpavadentendoḍe:
Haranirūpa sākṣi:
“Tathaiva śivasaṅgināṁ jananaṁ guruliṅgakaṁ|
caraliṅgavihārāccavināśō liṅgajaṅgamaṁ||
sadguroḥpāṇijātasya sthitiṁ sadbhaktasaṅgināṁ|
līyatē ca mahāliṅgē vīraśaivōttamasmr̥taḥ||”
endudāgi,
nijavīraśaivōttama ṣaṭsthalabrahmigaḷige
maraṇasūtakavembude pātaka kāṇā
niravayaprabhu mahānta sid'dhamallikārjunaliṅgēśvara.