Index   ವಚನ - 67    Search  
 
ನಿಜವೀರಶೈವಸಂಪನ್ನರ ಘನವಿರತಿಯಮಾರ್ಗವನರಿಯದೆ, ಶೈವಮತದ ಇಷ್ಟಲಿಂಗಬಾಹ್ಯರಂತೆ, ಎನ್ನ ಗಂಡ ಸತ್ತನೆಂದು ರೋದನಗಳಿಂದ ಗಂಡನ ಸಮಾಧಿಯಲ್ಲಿ ಬಳೆಯ ಒಡೆದು, ತಾಳಿಮಣಿಯ ಹರಿದು, ನಮ್ಮ ಮುತ್ತೈದೆತನ ಇಂದಿಗೆ ಹೋಯಿತೆಂದು ಸಂದೇಹಿಯಾಗಿ, ಘನಮಂತ್ರಮೂರ್ತಿ ಚಿದ್ಘನಲಿಂಗವೆಂಬ ನಿಜಪುರುಷನ ಮರೆದು ಮುಕ್ತಿಮಂದಿರವ ಸೇರದೆ, ಮತ್ತೊಬ್ಬನ ಕೂಡಿಕೊಂಡು, ಅಯೋಗ್ಯಪುರುಷರೆನಿಸಿ, ವಿಷಯಭೋಗಿಗಳಾಗಿ, ಅಷ್ಟಾವರಣ ಪಂಚಾಚಾರವ ಕೂಡದೆ, ಜನ್ಮಜರಾಮರಣಾದಿಗೊಳಗಾಗಿ ಎಂಬತ್ತುನಾಲ್ಕು ಜೀವಜಂತುವೆನಿಸಿ, ಒಂದರಲ್ಲಿ ಸ್ಥಿರವಾಗದೆ ತೊಳಲಿ ಬಳಲುವುದೆ ನಿಜಗೆಟ್ಟ ಅಯೋಗ್ಯರ ಮಾರ್ಗ ಕಾಣಾ ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.