Index   ವಚನ - 82    Search  
 
ಭಕ್ತಿಗೆ ಲಿಂಗಾಚಾರ, ಯುಕ್ತಿಗೆ ಸದಾಚಾರ, ಮುಕ್ತಿಗೆ ಶಿವಾಚಾರ, ಶಕ್ತಿಗೆ ಗಣಾಚಾರ, ವಿರಕ್ತಿಗೆ ಭೃತ್ಯಾಚಾರ, ನಡೆಗೆ ಕ್ರಿಯಾಚಾರ, ನುಡಿಗೆ ಜ್ಞಾನಾಚಾರ, ದೃಢಕ್ಕೆ ಭಾವಾಚಾರ, ತ್ಯಾಗಕ್ಕೆ ಸತ್ಯಾಚಾರ, ಭೋಗಕ್ಕೆ ನಿತ್ಯಾಚಾರ, ಯೋಗಕ್ಕೆ ಧರ್ಮಾಚಾರ, ನಿಜಕ್ಕೆ ಸರ್ವಾಚಾರವೆಂದು ಪರಶಿವಮೂರ್ತಿಯೆ ಪರಮೇಶ್ವರಿಯೆಂಬ ತನ್ನ ನಿಜವಲ್ಲಭೆ ಚಿಚ್ಛಕ್ತಿಗೆ ಬೋಧಿಸಿದ ಹರನಿರೂಪ ಸಾಕ್ಷಿ: ಸರ್ವಾಚಾರಸುಸಂಪನ್ನೆ ಸದಾ ಸಂಪನ್ನೋ ಹಿತಚ್ಛಿವಃ | ಲಿಂಗಾವಸಾನಕಾಲೇಷು ದ್ವಾದಶಾಚಾರಕಂ ಶ್ರುಣು || ಆಚಾರಂ ಗುರುರೂಪಂ ಚ ಅನಾಚಾರಂ ಪುನರ್ನರಃ | ಆಚಾರಂ ಗುರುರೂಪಂ ಚ ಆಚಾರಂ ಮುಕ್ತಿರೂಪಕಂ || ಆಚಾರಂ ಲಿಂಗರೂಪೇಣ ಆಚಾರಂ ಸದ್ಗುರೋಃ ಪದಂ | ಗುರುರ್ಲಿಗಂ ಜಂಗಮಶ್ಚ ಪ್ರಸಾದಂ ಪಾದವಾರಿಚ || ಭೂತಿ ರುದ್ರಾಕ್ಷಮಂತ್ರೇಣ ಭಕ್ತೋ ಜಗತಿ ಕಥ್ಯತೇ | ಪೂಜಾಯಾಂ ಧಾರಣಂ ಚೇತಿ ಆಚಾರಂ ಸರ್ವಕಾರಣಂ ||'' ಎಂದುದಾಗಿ, ಸರ್ವಾಚಾರಸಂಪತ್ತಿನಷ್ಟಾವರಣಸ್ವರೂಪ ತಾನೇ ತಾನಾದ ಸದ್ಧರ್ಮರೆ ನಿತ್ಯಮುಕ್ತರು ಕಾಣಾ ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.