Index   ವಚನ - 87    Search  
 
ಪ್ರಸಾದಿಸ್ಥಲ, ಗುರುಮಹಾತ್ಮೆಸ್ಥಲ, ಲಿಂಗಮಹಾತ್ಮೆಸ್ಥಲ, ಜಂಗಮಮಹಾತ್ಮೆಸ್ಥಲ, ಭಕ್ತಮಹಾತ್ಮೆಸ್ಥಲ, ಶರಣಮಹಾತ್ಮೆಸ್ಥಲ, ಪ್ರಸಾದಮಹಾತ್ಮೆಸ್ಥಲ, ಪ್ರಾಣಲಿಂಗಿಸ್ಥಲ, ಪ್ರಾಣಲಿಂಗಾರ್ಚನಸ್ಥಲ, ಶಿವಯೋಗಸಮಾಧಿಸ್ಥಲ, ಲಿಂಗನಿಜಸ್ಥಲ, ಅಂಗಲಿಂಗಸ್ಥಲವೆಂಬ ಹನ್ನೆರಡು ಸ್ಥಲಂಗಳನ್ನು ಶಿವಾಂಗಸ್ವರೂಪವಾದ ಪ್ರಸಾದಿ, ಚರಾಂಗಸ್ವರೂಪವಾದ ಪ್ರಾಣಲಿಂಗಿ, ಭೋಗಾಂಗಸ್ಥಲವನೊಳಕೊಂಡ ಲಿಂಗದಲ್ಲಿ ತಿಳಿದು ಆ ಲಿಂಗವನೆ ಮಹಾಜ್ಞಾನದಲ್ಲಿ ಕಂಡು, ಆ ಮಹಾಜ್ಞಾನವನೆ ಸುಜ್ಞಾನಮಂಡಲದಲ್ಲಿ ತರಹರವಾಗಿ, ಅಲ್ಲಿಂದ ಕಾಯಾನುಗ್ರಹಸ್ಥಲ, ಇಂದ್ರಿಯಾನುಗ್ರಹಸ್ಥಲ, ಪ್ರಾಣಾನುಗ್ರಹಸ್ಥಲ, ಕಾಯಾರ್ಪಿತಸ್ಥಲ,ಕರಣಾರ್ಪಿತಸ್ಥಲ, ಭಾವಾರ್ಪಿತಸ್ಥಲ, ಶಿಷ್ಯಸ್ಥಲ, ಶುಶ್ರೂಷ್ಯಸ್ಥಲ, ಸೇವ್ಯಸ್ಥಲ, ಜೀವಾತ್ಮಸ್ಥಲ, ಅಂತರಾತ್ಮಸ್ಥಲ, ಪರಮಾತ್ಮಸ್ಥಲ, ನಿರ್ದೇಹಾಗಮಸ್ಥಲ, ನಿರ್ಭಾವಾಗಮಸ್ಥಲ, ನಷ್ಟಾಗಮಸ್ಥಲ, ಆದಿಪ್ರಸಾದಿಸ್ಥಲ, ಅಂತ್ಯಪ್ರಸಾದಿಸ್ಥಲ, ಸೇವ್ಯಪ್ರಸಾದಿಸ್ಥಲವೆಂಬ ಹದಿನೆಂಟು ಸ್ಥಲಂಗಳನ್ನು ಮೂವತ್ತಾರು ಇಪ್ಪತ್ತನಾಲ್ಕು ಸಕೀಲಂಗಳನೊಳಕೊಂಡು ಪರಿಶೋಭಿಸುವಂಥ ಜಂಗಮಲಿಂಗ, ಸ್ವಯಪರವರಿಯದ ಸ್ಥಲವನೊಳಕೊಂಡ ನಿಃಶೂನ್ಯಲಿಂಗದಲ್ಲಿ ತಿಳಿದು, ಆ ನಿಃಶೂನ್ಯಬ್ರಹ್ಮವೆ ತಾನೇ ತಾನಾಗಿ, ಮೂವತ್ತಾರು ಚಿತ್ಪಾದೋದಕ ಪ್ರಸಾದಪ್ರಣಮಂಗಳೆಂಬ ಮೂಲಮಂತ್ರಸ್ವರೂಪವಾಗಿ ವಿರಾಜಿಸುವಾತನೆ ಸಮ್ಯಜ್ಞಾನಜಂಗಮಭಕ್ತನಾದ ನಿರಾಕಾರಮೂರ್ತಿಯಿರವು ಕಾಣಾ ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.