Index   ವಚನ - 3    Search  
 
ಬೆಲೆಯಿಲ್ಲದ ರತ್ನವ ಬೇಹಾರಿಸಿ ಕೊಂಬುವರಾರನು ಕಾಣೆ. ಎಲೆ ಮಹಾಪ್ರಭುವೆ ನೀನೆ ಮಹಾರತ್ನವು. ವ್ಯವಹಾರಿಯು ಬಸವಣ್ಣನು ಹೇಮವ ಒರೆಗಲ್ಲಿನಲ್ಲಿ ಒರೆದೊರೆದು, [ನೋಳ್ಪವ] ಬಸವಣ್ಣ ನೀನೊಬ್ಬನಲ್ಲದೆ ಮತ್ತಾರನು ಕಾಣೆ ಕರಸ್ಥಳದ ಇಷ್ಟಲಿಂಗೇಶ್ವರಾ.