Index   ವಚನ - 4    Search  
 
ಎಲೆ ಅಯ್ಯಾ, ನಿಮ್ಮ ನಿಲವ ನಿರ್ಮಳವ ಬಲ್ಲವರಾರು? ಆರೂ ಇಲ್ಲ. ಕಾಯದ ನಿಲವ ಮಾಯೆಗೆ ಒಪ್ಪಿಸಿ ದೇವ ನಿರಾಲಂಬವಾಗಿ, ನಿರಹಂಕಾರ ನಿರ್ಮಾಲ್ಯ ನಿತ್ಯನಿರ್ಗುಣ ಸತ್ಯ ಸದಮಲ ಸಮರಸ[ಲಿ] 0ಗ ಸಂಗನ ಶರಣ ನಮ್ಮ ಅಲ್ಲಾಳೇಶ್ವರನೆಂಬ ನಾಮವು ನಿನಗೆ ತಕ್ಕುದಲ್ಲದೆ ಕಾಮಾಕ್ಷಿಯೊಳು ಬೆರದು ಪೇಳಿ ಏಕಚಕ್ಷುದಯನಿತ್ತಾತ ನೀನೆ ಕಾಣಾ ಕರಸ್ಥಳದ ಇಷ್ಟಲಿಂಗೇಶ್ವರಾ.