Index   ವಚನ - 5    Search  
 
ದೇವರೆಲ್ಲರ ಹೊಡದು ತಂದು ಮಾಯೆಯೊಳಗೆ ಕೂಡಿತ್ತು. ಹರಹರ ಮಾಯೆ[ಯ] ಇರವ ನೋಡಾ! ಗಿರಿಜೆ ಕಳೆಯ ಇಮ್ಮಡಿ ಗುಣದ ಶಾಂತತೆಯ ನಿರ್ವಿಕಾರದ ಗಿರಿಜೆ ಕಳೆಯ ರೂಪಾಗಿ ಇಳೆಗೆ ಬಂದು ಪಾಶವ ಹಾಕಿ ಕಟ್ಟಿನೊಳಗೆ ಅವುಕಿ ಮರುಳು ಮಾಡಿಸುವಳು. ಬಾಯ ತೆಗೆಸುವಳು, ಬಳಲಿಸುವಳು, ಬಣ್ಣಗುಂದಿಸುವಳು. ಮೂರು ಲೋಕದವರೆಲ್ಲ ಮಂಕು ಕುರಿಗಳು ಬೆಂಬತ್ತಿ ತಿರುಗಿಸುವಳು. ಇಂಥ ಮಾಯಾವಿಕಾರದ ಮಾಯೆಯ ಜನನವ ನೋಡಾ ಕರಸ್ಥಳದ ಇಷ್ಟಲಿಂಗೇಶ್ವರಾ.