Index   ವಚನ - 7    Search  
 
ಕಾಮ ಕಾಲದೆ ಕಾಡುವ ಮಾಯೆ ನೆಳಲುಗತ್ತಲೆ ನೀನು ಮಾಯೆ. ಸಂಗ ಸುಖದಿಂದ ಹಿಂಗುವರಾರುಯಿಲ್ಲ ಬಿಗಿದ ಕುಚ, ಉರಮಧ್ಯವು ಲಿಂಗಾಕಾರವು ಮಹೇಶ್ವರಗೆಯೂ ಪ್ರೀತಿಯು ಸನ್ಮೋಹ ಅಮೃತ ಸಾರವು ಇಳೆ ಉತ್ಪತ್ಯಕ್ಕೆ ಆಧಾರವು ಇಂಥ ಮೋಹಪ್ರಿಯವಾದ ಮೋಹಿನಿಯರ ಅಗಲುವುದೆಂತೊ ಕರಸ್ಥಳದ ಇಷ್ಟಲಿಂಗೇಶ್ವರಾ?