Index   ವಚನ - 8    Search  
 
ಮಾಯೆ ಘನವಾದರೆ ಪುರುಷಂಗೆ ಅಳುಕುವಳೆ? ಇಳೆಯ ಜನ ಉತ್ಪತ್ತಿಗಳೆಲ್ಲ ಮಾಯೆ ಘನವೆಂಬರು. ಮರುಳು ಭ್ರಮೆವಿಡಿದು, ಅದು ಹುಸಿಯು. ಅರಿಯಿರೆ-ಮಾಯಾಂಗನೆಯ ರೂಪಾಗಿ ಮರ್ತ್ಯಕ್ಕೆ ಬಂದು, ಶರಣ ಮಹಿಮರ ಸೋಲಿಸೇನೆಂದು ನಿಂದಿಹುದಕ್ಕೆ, ಸಾಕ್ಷಾತ್ ಶಂಭು ಅಲ್ಲಮನೆಂಬ ನಾಮಗಳಿಂದ ಸೋಲಿಸಿ, ಮಾಯಾಕೋಳಾ[ಹಳ]ನೆಂಬ ಬಿರಿದು ಶಿವಂಗಲ್ಲದೆ ಮರ್ತ್ಯಲೋಕದ ಮಾನವರಿಗೆ ಸಾಧ್ಯವೆ? ತನ್ನ ತಾನೆ ಇತರ ದಾಡಿಯಮಾಡಿ ಕೊಂಡಳು ಕಾಣಾ ಕರಸ್ಥಳ[ದ] ಇಷ್ಟಲಿಂಗೇಶ್ವರಾ.