Index   ವಚನ - 9    Search  
 
ಕಾಣದುದನರಸುವರಲ್ಲದೆ ಕಂಡುದನರಸುವರು ಆರೂ ಇಲ್ಲವು. ದಿಂಡೆಯರು ಮೊಂಡರು ಮೂಕೊರೆಯರು ಪೆಂಡರುಗಳೆಲ್ಲ ಮಂಡಲದೊಳು ಬಂಡು ಭೂತಗಳಾಗಿ ಹೋದವು. ಕಂಡುದ ನಿಜನಿಲವರಿದು ಚಂಡಿಗಿಗೆ ಸಮವಾಗಿ ಮುಕ್ತಿಗಳಿಗೇನೆಂಬೆನಯ್ಯ? ಶಿವ ದೇವಿಗಲ್ಲದೆ ಗಂಡರಬಿಟ್ಟ ದಿಂಡೇರ ಕೈಯಲ್ಲಿ ಕುಂಡಿಯನುದ್ಧಿಸಿಕೊಂಬ ಮೂಳ ಹೊಲೆ ಹಾದರಗಿತ್ತಿಗೆ ಸರಿಯೇನಯ್ಯ? ಈಶಾನ್ಯಶೆಟ್ಟಿಯ ಸತಿಯು ಶಿವದೇವಿಗೆ ಸರಿಯೆಂಬುವರ ಬಾಯ ಮೇಲೆ ಕುಟ್ಟೆಂದ ನಮ್ಮ ಚೆನ್ನಸಂಗಮದೇವ.