Index   ವಚನ - 10    Search  
 
ಕಾಯಯ್ಯ ಕಾಯಯ್ಯ ಕರುಣದಿ ನೀನು. ಆಸೆಯ ಪಾಶವೆ ಮಾಯೆ[ಯ] ವಾಸದಲ್ಲಿ ಇರಲಮ್ಮದೆ ಭಾಷೆಯ ಕೊಟ್ಟೆ ಭಜನೆಯ ತೋ[ರಿದೆ]; ಭಾರವ ಹೊರಿಸದಿರಯ್ಯ. ದೇಸಿಗರಿಗೆ ದೇವ ನೀನಲ್ಲದೆ ಮತ್ತೆ ದೈವಂಗಳಿಲ್ಲವೆಂದು ಶ್ರುತಿ ಆಗಮದಲ್ಲಿ ಸಾರುತ್ತಿದ್ದವು. ಅದನೆ ಒಲಿದು, ಅದನೆ ಉಟ್ಟೆ, ಅದನೆ ಉಂಡು ಅದನೆ ಹೊದ್ದು, ಅದನೆ ಹರಸಿ, ಅದನೆ ಬೆರಸಿ, ಅದನೆ ಕೂಡಿ, ಅದನೆ ಬಿತ್ತಿ, ಅದನೆ ಬೆಳೆದು ಅಹೋ ರಾತ್ರಿಯಲ್ಲಿ ಸ್ತುತಿಪೆ ಕಾಣಾ ಇಷ್ಟಲಿಂಗೇಶ್ವರಾ.