Index   ವಚನ - 17    Search  
 
ವಿಷಯವೆಂಬ ಕಾಳಗಿಚ್ಚಿನ ಜ್ವಾಲೆಯಲ್ಲಿ ಈರೇಳುಲೋಕವೆಲ್ಲ ಹತವಾಗುತಿರ್ಪುದು ನೋಡಾ! ಅದೆಂತೆಂದೊಡೆ: ಕುಂಡಲಿಯೆಂಬ ಮಾಯಾಸರ್ಪನು ತನ್ನ ಬಾಲವ ಬ್ರಹ್ಮರಂಧ್ರಕ್ಕೇರಿಸಿ, ನಾಭಿಚಕ್ರವ ಸುತ್ತಿಕೊಂಡು, ಅಧೋಮುಖವಾಗಿ ಇಂದ್ರಿಯವಿಷವ ಕಾರುತಿಪ್ಪುದು ನೋಡಾ! ಆ ವಿಷದ ನಂಜು ತಲೆಗೇರಿದಲ್ಲಿ ಅಸಿಯ ಜವ್ವನೆಯರ ಸಂಗಸುಖ ಬಹುಸವಿಯೆಂದು ತಲೆದೂಗುತ್ತಿಪ್ಪುದು ನೋಡಾ ಸಕಲ ಪ್ರಾಣಿಗಳು. ಇದು ಪಶುಪತಿಯು ಮಾಡಿದ ಮಾಯದ ವಿಧಿಯೆಂದು ತಿಳಿಯದೆ ಹಸಗೆಟ್ಟುಹೋಯಿತ್ತು ನೋಡಾ ಮೂಜಗವೆಲ್ಲ ಅಖಂಡೇಶ್ವರಾ.