ಬಣ್ಣದಚರ್ಮದ ಹೆಣ್ಣಿನಂಗಸಂಗದ ಕೂಟಸುಖ ಸವಿಯೆಂದು
ಮನವೆಳಸುವ ಕಣ್ಣುಗೆಟ್ಟಣ್ಣಗಳು ನೀವು ಕೇಳಿರೋ!
ಶುನಿ ಎಲುವ ಕಡಿವಲ್ಲಿ
ತನ್ನ ಬಾಯ ಲೋಳೆ ತನಗೆ ಸವಿದಟ್ಟುತಿಪ್ಪುದಲ್ಲದೆ,
ಆ ಎಲುವಿನೊಳಗೇನು ಸಾರಸವಿಯುಂಟೆ?
ತನ್ನ ಊರ್ಧ್ವಬಿಂದು ಮಾಯಾವಶದಿಂದೆ ಅಧೋಗತಿಗಿಳಿದು
ಮೂತ್ರನಾಳ ತಗುಲಿ ಕಿಂಚಿತ್ ಸುಖ ಉಂಟಾಗುತಿಪ್ಪುದಲ್ಲದೆ
ಆ ಹೆಣ್ಣಿನಿಂದೇನು ಸುಖವುಂಟೆ? ಎಡ್ಡ ಪ್ರಾಣಿಗಳಿರಾ!
ಇಂತೀ ದೃಷ್ಟವ ತಿಳಿದು ಭೇದಿಸಿ ಕಾಣಲರಿಯದೆ
ಹೇಸಿಕೆಯ ಕಿಸುಕುಳದ ಕೀವುತುಂಬಿ ಒಸರುವ
ಹಸಿಯತೊಗಲಿನ ಹಳೆಯಗಾಯದಲ್ಲಿ
ವಿಷಯಾತುರದಿಂದೆ ಬಿದ್ದು ಮತಿಮಸುಳಿಸಿ ಮುಂದುಗಾಣದೆ
ಮುಳುಗಾಡುತಿಪ್ಪುದು ನೋಡಾ
ಮೂಜಗವೆಲ್ಲ ಅಖಂಡೇಶ್ವರಾ.
Art
Manuscript
Music
Courtesy:
Transliteration
Baṇṇadacarmada heṇṇinaṅgasaṅgada kūṭasukha saviyendu
manaveḷasuva kaṇṇugeṭṭaṇṇagaḷu nīvu kēḷirō!
Śuni eluva kaḍivalli
tanna bāya lōḷe tanage savidaṭṭutippudallade,
ā eluvinoḷagēnu sārasaviyuṇṭe?
Tanna ūrdhvabindu māyāvaśadinde adhōgatigiḷidu
mūtranāḷa taguli kin̄cit sukha uṇṭāgutippudallade
ā heṇṇinindēnu sukhavuṇṭe? Eḍḍa prāṇigaḷirā!
Intī dr̥ṣṭava tiḷidu bhēdisi kāṇalariyade
hēsikeya kisukuḷada kīvutumbi osaruvaHasiyatogalina haḷeyagāyadalli
viṣayāturadinde biddu matimasuḷisi mundugāṇade
muḷugāḍutippudu nōḍā
mūjagavella akhaṇḍēśvarā.