Index   ವಚನ - 23    Search  
 
ಕಿಸುಕುಳದ ಕೀವು ರಕ್ತದ, ಒಸೆದು ತುಂಬಿದ ಮಲಮೂತ್ರದ ರಂಜನ ಮುಸುಕಿದ ಮಾಂಸ ಅಸ್ಥಿಗಳ ಸುತ್ತಿನ ಹಸನಾದ ಚರ್ಮದ ಹೊದಿಕೆಯ ಹುಸಿಯ ತನುವ ಮೆಚ್ಚಿ, ಪಶುಪತಿ, ನಿಮ್ಮ ನಾನು ಮರೆದೆನಯ್ಯ ಅಖಂಡೇಶ್ವರಾ.