Index   ವಚನ - 32    Search  
 
ಹುಲಿಯಬಾಯಲ್ಲಿ ಸಿಲ್ಕಿದ ಹುಲ್ಲೆಯಂತೆ, ಸರ್ಪನಬಾಯಲ್ಲಿ ಸಿಲ್ಕಿದ ಕಪ್ಪೆಯಂತೆ, ಸಕಲ ಲೋಕಾದಿಲೋಕಂಗಳು ಮಾಯೆಯಬಲೆಯಲ್ಲಿ ಸಿಲ್ಕಿ, ಸೆರೆಹೋಗುವುದ ಕಂಡು ನಾನಂಜಿ ನಿಮ್ಮ ಮೊರೆಹೊಕ್ಕೆ, ಕಾಯಯ್ಯ ಕಾರುಣ್ಯನಿಧಿಯೇ ಅಖಂಡೇಶ್ವರಾ.