Index   ವಚನ - 35    Search  
 
ಎನ್ನ ಕಾಯದ ಕಠಿಣವ ಕಳೆಯಯ್ಯ, ಎನ್ನ ಜೀವನುಪಾಧಿಯನಳಿಯಯ್ಯ, ಎನ್ನ ಪ್ರಾಣಪ್ರಪಂಚುವ ತೊಲಗಿಸಯ್ಯ, ಎನ್ನ ಭಾವದಭ್ರಮೆಯ ಕೆಡಿಸಯ್ಯ, ಎನ್ನ ಮನದ ವ್ಯಾಕುಲವ ಮಾಣಿಸಯ್ಯ, ಎನ್ನ ಕರಣೇಂದ್ರಿಯಗಳ ಕಷ್ಟಗುಣವ ನಾಶಮಾಡಯ್ಯ, ಎನ್ನೊಳಗೆ ನಿಮ್ಮ ಕರುಣಾಮೃತವ ತುಂಬಯ್ಯ ಗುರುವೇ ಅಖಂಡೇಶ್ವರಾ.