Index   ವಚನ - 49    Search  
 
ಶ್ರೀಗುರುಸ್ವಾಮಿ ಮಾಡಿದಡಾಯಿತ್ತು ಜಗದುತ್ಪತ್ಯ ಸಚರಾಚರಂಗಳೆಲ್ಲ. ಶ್ರೀಗುರುಸ್ವಾಮಿ ಮಾಡಿದಡಾಯಿತ್ತು ತತ್ತ್ವಾತತ್ವ ಸಕಲಸ್ಥಲಕುಲಂಗಳೆಲ್ಲ. ಶ್ರೀಗುರುಸ್ವಾಮಿ ಮಾಡಿದಡಾಯಿತ್ತು ನಿಗಮಾಗಮ ಸಕಲಶಾಸ್ತ್ರಜಾಲಂಗಳೆಲ್ಲ. ಶ್ರೀಗುರುಸ್ವಾಮಿ ಮಾಡಿದಡಾಯಿತ್ತು ಅಖಂಡೇಶ್ವರಾ, ನಾನು ನೀನೆಂಬ ಉಭಯದ ತೊಡರುಗಳೆಲ್ಲ.