Index   ವಚನ - 50    Search  
 
ಎನ್ನ ತನುವ ತನ್ನ ತನುವ ಮಾಡಿದನಯ್ಯ ಶ್ರೀಗುರುದೇವನು. ಎನ್ನ ಮನವ ತನ್ನ ಮನವ ಮಾಡಿದನಯ್ಯ ಶ್ರೀಗುರುದೇವನು. ಎನ್ನ ಪ್ರಾಣವ ತನ್ನ ಪ್ರಾಣವ ಮಾಡಿದನಯ್ಯ ಶ್ರೀಗುರುದೇವನು. ಎನ್ನ ಜೀವಕಳೆಯ ತನ್ನ ಜೀವಕಳೆಯ ಮಾಡಿದ ಶ್ರೀಗುರುದೇವಂಗೆ ನಮೋ ನಮೋ ಎಂಬೆನಯ್ಯ ಅಖಂಡೇಶ್ವರಾ.