Index   ವಚನ - 51    Search  
 
ಎನ್ನ ತನುವ ಶೋಧಿಸಿ ಚಿನುಮಯಲಿಂಗವ ಮಾಡಿ ತೋರಿದನಯ್ಯ ಸದ್ಗುರು. ಎನ್ನ ಮನವ ಶೋಧಿಸಿ ಮನಘನಲಿಂಗವ ಮಾಡಿ ತೋರಿದನಯ್ಯ ಸದ್ಗುರು. ಎನ್ನ ಭಾವವ ಶೋಧಿಸಿ ಭಾವಭರಿತಲಿಂಗವ ಮಾಡಿ ತೋರಿದನಯ್ಯ ಸದ್ಗುರು. ಎನ್ನ ಕರಣಂಗಳ ಕಳೆದು ಲಿಂಗಕರಣಂಗಳ ಮಾಡಿದ ಸದ್ ಗುರುದೇವಂಗೆ ನಮೋ ನಮೋ ಎಂಬೆನಯ್ಯ ಅಖಂಡೇಶ್ವರಾ.