Index   ವಚನ - 57    Search  
 
ಅಶ್ವವ ಕೊಂದವನಾದಡಾಗಲಿ, ಪಶುವ ಕೊಂದವನಾದಡಾಗಲಿ, ಬ್ರಾಹ್ಮಣನ ಕೊಂದವನಾದಡಾಗಲಿ, ಶಿಶುವ ಕೊಂದವನಾದಡಾಗಲಿ, ಸ್ತ್ರೀಯ ಕೊಂದವನಾದಡಾಗಲಿ, ಅನಂತ ಪಾತಕಂಗಳ ಮಾಡಿದವನಾದಡಾಗಲಿ, ಶಿವಲಿಂಗದ ದರ್ಶನವಾದಾಕ್ಷಣದಲ್ಲಿಯೇ ಆ ಪಾತಕಂಗಳು ಪಲ್ಲಟವಾಗಿಹವು ನೋಡಾ. ಅದೆಂತೆಂದೊಡೆ: ಅಭಕ್ಷ್ಯಭಕ್ಷಕೋ ವಾಪಿ ಬ್ರಹ್ಮಹಾ ಯದಿ ಮಾತೃಹಾ | ಪಿತೃಹಾ ಬಾಲಘಾತೀ ಚ ಗೋಘ್ನಃ ಸ್ತ್ರೀ ಶೂದ್ರಘಾತಕಃ || ವಕ್ತಾಚ ಪರದೋಷಸ್ಯ ಪರಸ್ಯ ಗುಣದೂಷಕಃ | ಕೃಪಣೋsನೃತವಾದೀ ಚ ಮಣಿರತ್ನಾಪಹಾರಕಃ | ಸರ್ವಪಾಪಮಯಃ ಪೂತೋ ಮುಚ್ಯತೇ ಲಿಂಗದರ್ಶನಾತ್ ||'' ಎಂದುದಾಗಿ, ಪರಮಪದವಿಯನೈದುತಿಹನಯ್ಯ ಅಖಂಡೇಶ್ವರಾ.