Index   ವಚನ - 58    Search  
 
ಜ್ಞಾನದಿಂದಾದಡಾಗಲಿ ಅಜ್ಞಾನದಿಂದಾದಡಾಗಲಿ, ಭೀತಿಯಿಂದಾದಡಾಗಲಿ ನಿರ್ಭೀತಿಯಿಂದಾದಡಾಗಲಿ, ಸದ್ಭಾವದಿಂದಾದಡಾಗಲಿ ದುರ್ಭಾವದಿಂದಾದಡಾಗಲಿ, ಆವ ಪರಿಯಿಂದಾದಡಾಗಲಿ ಪರಮಶಿವಲಿಂಗದರ್ಶನಮಾತ್ರದಿಂದ ಜಾತಿಸ್ಮರತ್ವ ಮಹದೈಶ್ವರ್ಯ ಪರಮಾಯುಷ್ಯ ಶುದ್ಧವಿದ್ಯಂಗಳು ಸಮ್ಯಕ್‍ಜ್ಞಾನ ಸಕಲಸಂಪತ್ತುಗಳು ದೊರೆಕೊಂಬುವು ನೋಡಾ ಅಖಂಡೇಶ್ವರಾ.