Index   ವಚನ - 60    Search  
 
ಮುನ್ನ ಶ್ರೀಗುರುಸ್ವಾಮಿ ಕರುಣಿಸಿ ಕೊಟ್ಟ ಇಷ್ಟಲಿಂಗದಲ್ಲಿ ನೆಟ್ಟನೆ ಅಂಗ ಮನ ಪ್ರಾಣಂಗಳು ಸಂಗಿಸಬೇಕು. ಬಳಿಕ ನಡೆನುಡಿಯಲ್ಲಿ ಆ ಲಿಂಗ ಸನ್ನಿಹಿತವಾಗಿರಬೇಕಲ್ಲದೆ ಹಿಂಗಿರಲಾಗದು. ಕೊಡುಕೊಂಬ ವ್ಯವಹಾರದಲ್ಲಿ ಆ ಲಿಂಗ ಸನ್ನಿಹಿತವಾಗಿರಬೇಕಲ್ಲದೆ ಹಿಂಗಿರಲಾಗದು. ಜಾಗ್ರಸ್ವಪ್ನಸುಷುಪ್ತಿಗಳಲ್ಲಿ ಆ ಲಿಂಗ ಸನ್ನಿಹಿತವಾಗಿರಬೇಕಲ್ಲದೆ ಹಿಂಗಿರಲಾಗದು. ಅದೆಂತೆಂದೊಡೆ: ಗಚ್ಛನ್ ತಿಷ್ಠನ್ ಸ್ವಪನ್ ಜಾಗ್ರನ್ ಉನ್ಮಿಷನ್ ನಿಮಿಷನ್ನಪಿ | ಶುಚಿರ್ವಾಪ್ಯಶುಚಿರ್ವಾಪಿ ಲಿಂಗಂ ಸರ್ವತ್ರ ಧಾರಯೇತ್ ||'' ಎಂದುದಾಗಿ, ಸರ್ವಾವಸ್ಥೆಯಲ್ಲಿ ಲಿಂಗಸನ್ನಿಹಿತವಾಗಿರಬೇಕಲ್ಲದೆ, ನಿಮಿಷಾರ್ಧ ಲಿಂಗವನಗಲಿದರೆ ಕುಂಭೀಪಾತಕ ನಾಯಕನರಕ ತಪ್ಪದು ನೋಡಾ ಅಖಂಡೇಶ್ವರಾ.