Index   ವಚನ - 74    Search  
 
ಸಾಲೋಕ್ಯವಿದೆ, ಸಾಮೀಪ್ಯವಿದೆ, ಸಾರೂಪ್ಯವಿದೆ, ಸಾಯುಜ್ಯವಿದೆ, ಚತುರ್ವಿಧಫಲಪುರುಷಾರ್ಥವಿದೆ. ಸುರತರುವಿದೆ, ಸುರಧೇನುವಿದೆ. ವರಚಿಂತಾಮಣಿಯಿದೆ, ಪರುಷದ ವಾರಿಧಿಯಿದೆ. ಸಂಜೀವನವಿದೆ, ಜ್ಞಾನವಿದೆ, ಮೋಕ್ಷವಿದೆ, ಪರತರ ಪರಮಪದವಿದೆ. ಪರಶಿವ ಪರಂಜ್ಯೋತಿ ಬ್ರಹ್ಮವಿದೆ. ಎನ್ನ ಕರಸ್ಥಲದಲ್ಲಿ ಮೂರ್ತಿಗೊಂಡ ಅಖಂಡೇಶ್ವರಲಿಂಗವಿದೆ.