Index   ವಚನ - 75    Search  
 
ಸತ್‍ಚಿತ್ತಾನಂದ ನಿತ್ಯ ಪರಿಪೂರ್ಣವಾದ ಪರವಸ್ತುವು ಪ್ರತ್ಯಕ್ಷವಾಗಿ ಎನ್ನ ಕರಸ್ಥಲಕ್ಕೆ ಬಂದಿರಲು, ಬಳಿಕ ಇನ್ನೆಲ್ಲಿಯದಯ್ಯ ಎನಗೆ ಜಪತಪದ ಚಿಂತೆ? ಇನ್ನೆಲ್ಲಿಯದಯ್ಯ ಎನಗೆ ನೇಮನಿತ್ಯದ ಚಿಂತೆ? ಇನ್ನೆಲ್ಲಿಯದಯ್ಯ ಎನಗೆ ಮೌನಮುದ್ರೆಯ ಚಿಂತೆ? ಅಖಂಡೇಶ್ವರಲಿಂಗವು ಎನ್ನೊಳಹೊರಗೆ ತಾನಾದ ಬಳಿಕ ಇನ್ನೆಲ್ಲಿಯದಯ್ಯ ಎನಗೆ ಬೇರೆ ತತ್ವವನರಿಯಬೇಕೆಂಬ ಚಿಂತೆ?