Index   ವಚನ - 76    Search  
 
ಶಿವಶಿವಾ ಮಹಾಪ್ರಸಾದ ಎನ್ನ ಚರಣವು ನಿಮ್ಮ ಶಿವಾಚಾರಮಾರ್ಗದಲ್ಲಲ್ಲದೆ ಅನ್ಯಮಾರ್ಗದಲ್ಲಿ ಚರಿಸದಂತೆ ಮಾಡಯ್ಯ. ಎನ್ನ ಹಸ್ತವು ನಿಮ್ಮನಲ್ಲದೆ ಅನ್ಯವ ಮುಟ್ಟದಂತೆ ಮಾಡಯ್ಯ. ಎನ್ನ ಕಂಗಳು ನಿಮ್ಮನಲ್ಲದೆ ಅನ್ಯವ ನೋಡದಂತೆ ಮಾಡಯ್ಯ. ಎನ್ನ ಶ್ರೋತ್ರವು ನಿಮ್ಮ ಕೀರ್ತನೆಯನಲ್ಲದೆ ಅನ್ಯವ ಕೇಳದಂತೆ ಮಾಡಯ್ಯ. ಎನ್ನ ಜಿಹ್ವೆಯು ನಿಮ್ಮನಲ್ಲದೆ ಅನ್ಯರ ಹೊಗಳದಂತೆ ಮಾಡಯ್ಯ. ಎನ್ನ ಮನವು ನಿಮ್ಮನಲ್ಲದೆ ಅನ್ಯವ ಬಯಸದಂತೆ ಮಾಡಯ್ಯ ಅಖಂಡೇಶ್ವರಾ.