Index   ವಚನ - 78    Search  
 
ಶಿವಶಿವಾ ಎಂದು ಶಿವನ ಕೊಂಡಾಡುತ್ತ ಶ್ರೀ ವಿಭೂತಿಯ ಧರಿಸಿ, ಶ್ರೀ ಮಹಾದೇವನ ಪೂಜಿಸುವಾತನ ಕಾಯವೇ ಕೈಲಾಸ. ಆತನ ನಡೆಯೇ ಪಾವನ, ಆತನ ನುಡಿಯೇ ಆಗಮ. ಆತನ ದರುಶನ ಸ್ಪರುಶನವೇ ಸಕಲ ಪ್ರಾಣಿಗಳಿಗೆ ಸಾಲೋಕ್ಯಪದವು ನೋಡಾ! ಆ ಮಹಾತ್ಮನಿಂದಧಿಕರು ಮೂಲೋಕದೊಳಗಿಲ್ಲ ನೋಡಾ ಅಖಂಡೇಶ್ವರಾ.