Index   ವಚನ - 79    Search  
 
ಹೀನಜಾತಿಯಲ್ಲಿ ಹುಟ್ಟಿದ ಮಾನವನಾದಡಾಗಲಿ ಶಿವಧ್ಯಾನದಿಂದ ನೊಸಲಲ್ಲಿ ಶ್ರೀ ವಿಭೂತಿಯ ಧರಿಸಿದಾತನ ಏನೆಂದು ಉಪಮಿಸಬಹುದಯ್ಯ? ಆತನಲ್ಲಿ ಜ್ಞಾನಪರೀಕ್ಷೆಯ ಮಾಡಲಾಗದು. ಆತನಲ್ಲಿ ವ್ರತದ ಪರೀಕ್ಷೆಯ ಮಾಡಲಾಗದು. ಆತನು ಮಹಾಪೂಜ್ಯನು ನೋಡಾ! ಅದೆಂತೆಂದೊಡೆ: ತಸ್ಮಿನ್ ಜ್ಞಾನಂ ಪರೀಕ್ಷೇತ ನ ಕುಲಂ ನ ವ್ರತಂ ತಥಾ | ತ್ರಿಪುಂಡ್ರಾಂಕಿತಭಾಲೇನ ಪೂಜ್ಯ ಏವ ಹಿ ನಾರದ ||'' ಎಂದುದಾಗಿ, ಆ ಘನಮಹಿಮ ಇಹಪರಕೆ ಶ್ರೇಷ್ಠನು ನೋಡಾ ಅಖಂಡೇಶ್ವರಾ.