ಸಚ್ಚಿದಾನಂದ ಪರಶಿವನ
ಸದ್ಯೋಜಾತಮುಖದಿಂದ
ಪೃಥ್ವಿತತ್ತ್ವ ಪುಟ್ಟಿತ್ತು.
ಆ ತತ್ವದಿಂದೆ ನಿವೃತ್ತಿ ಎಂಬ ಕಲೆ ಪುಟ್ಟಿತ್ತು.
ಆ ಕಲೆಯಿಂದೆ ಕಪಿಲವರ್ಣದ
ನಂದಿನಿಯೆಂಬ ಗೋವು ಪುಟ್ಟಿತ್ತು.
ಆ ಗೋವಿನ ಗೋಮಯದಿಂದೆ
ಮಹದೈಶ್ವರ್ಯವನ್ನುಂಟುಮಾಡುವಂಥ
ಭೂತಿ ಎಂಬ ವಿಭೂತಿ ಪುಟ್ಟಿತ್ತು.
ಮತ್ತಂ,
ಸಚ್ಚಿದಾನಂದ ಪರಶಿವನ ವಾಮದೇವಮುಖದಿಂದೆ
ಅಪ್ಪುತತ್ವ ಪುಟ್ಟಿತ್ತು.
ಆ ತತ್ವದಿಂದೆ ಪ್ರತಿಷ್ಠೆಯೆಂಬ ಕಲೆ ಪುಟ್ಟಿತ್ತು.
ಆ ಕಲೆಯಿಂದೆ ಕೃಷ್ಣವರ್ಣದ
ಭದ್ರೆಯೆಂಬ ಗೋವು ಪುಟ್ಟಿತ್ತು.
ಆ ಗೋವಿನ ಗೋಮಯದಿಂದೆ
ದಿವ್ಯಪ್ರಕಾಶದಿಂ ಬೆಳಗುವಂಥ
ಭಸಿತವೆಂಬ ವಿಭೂತಿ ಪುಟ್ಟಿತ್ತು.
ಮತ್ತಂ,
ಸಚ್ಚಿದಾನಂದ ಪರಶಿವನ ಅಘೋರಮುಖದಿಂದೆ
ಅಗ್ನಿತತ್ವ ಪುಟ್ಟಿತ್ತು.
ಆ ತತ್ವದಿಂದೆ ವಿದ್ಯೆಯೆಂಬ ಕಲೆ ಪುಟ್ಟಿತ್ತು.
ಆ ಕಲೆಯಿಂದೆ ರಕ್ತವರ್ಣದ ಸುರಭಿಯೆಂಬ ಗೋವು ಪುಟ್ಟಿತ್ತು.
ಆ ಗೋವಿನ ಗೋಮಯದಿಂದೆ ಸಮಸ್ತ
ಪಾತಕಂಗಳ ಭಕ್ಷಿಸುವಂಥ
ಭಸ್ಮವೆಂಬ ವಿಭೂತಿ ಪುಟ್ಟಿತ್ತು.
ಮತ್ತಂ,
ಸಚ್ಚಿದಾನಂದ ಪರಶಿವನ ತತ್ಪುರುಷಮುಖದಿಂದೆ
ವಾಯುತತ್ವ ಪುಟ್ಟಿತ್ತು.
ಆ ತತ್ವದಿಂದೆ ಶಾಂತಿಯೆಂಬ ಕಲೆ ಪುಟ್ಟಿತ್ತು.
ಆ ಕಲೆಯಿಂದೆ ಶ್ವೇತವರ್ಣದ
ಸುಶೀಲೆಯೆಂಬ ಗೋವು ಪುಟ್ಟಿತ್ತು.
ಆ ಗೋವಿನ ಗೋಮಯದಿಂದೆ
ಸಕಲ ವ್ಯಾಧಿಗಳ ಕೆಡಿಸುವಂಥ
ಕ್ಷಾರವೆಂಬ ವಿಭೂತಿ ಪುಟ್ಟಿತ್ತು.
ಮತ್ತಂ,
ಸಚ್ಚಿದಾನಂದ ಪರಶಿವನ ಈಶಾನ್ಯಮುಖದಿಂದೆ
ಆಕಾಶತತ್ವ ಪುಟ್ಟಿತ್ತು.
ಆ ತತ್ವದಿಂದೆ ಶಾಂತ್ಯತೀತವೆಂಬ ಕಲೆ ಪುಟ್ಟಿತ್ತು.
ಆ ಕಲೆಯಿಂದೆ ಚಿತ್ರವರ್ಣದ
ಸುಮನೆಯೆಂಬ ಗೋವು ಪುಟ್ಟಿತ್ತು.
ಆ ಗೋವಿನ ಗೋಮಯದಿಂದೆ ಭೂತ ಪ್ರೇತ ಪಿಶಾಚಿ
ಬ್ರಹ್ಮರಾಕ್ಷಸ ಚೋರ ಸರ್ಪ
ವ್ಯಾಘ್ರಾದಿಗಳ ಭಯವ ಕೆಡಿಸುವ
ರಕ್ಷೆಯೆಂಬ ವಿಭೂತಿ ಪುಟ್ಟಿತ್ತು.
ಅದೆಂತೆಂದೊಡೆ: ಜಾಬಾಲೋಪನಿಷದಿ:
ಸದ್ಯೋಜಾತಾತ್ ಪೃಥಿವೀ ತಸ್ಯಾಃ ನಿವೃತ್ತಿಃ
ತಸ್ಯಾಃ ಗೋಮಯೇನ ವಿಭೂತಿರ್ಜಾತಾ ||
ವಾಮದೇವಾದುದಕಂ ತಸ್ಮಾತ್ ಪ್ರತಿಷ್ಠಾ
ತಸ್ಯಾಃ ಗೋಮಯೇನ ಭಸಿತಂ ಜಾತಂ ||
ಅಘೋರಾದ್ ವಹ್ನಿಃ ತಸ್ಮಾತ್ ವಿದ್ಯಾ
ತಸ್ಯಾಃ ರಕ್ತವರ್ಣಾ ಸುರಭೀ
ತಸ್ಯಾಃ ಗೋಮಯೇನ ಭಸ್ಮ ಜಾತಂ||
ತತ್ಪುರುಷಾದ್ ವಾಯುಃ ತಸ್ಮಾತ್ ಶಾಂತಿಃ
ತಸ್ಯಾಃ ಶ್ವೇತವರ್ಣಾ ಸುಶೀಲಾ
ತಸ್ಯಾಃ ಗೋಮಯೇನ ಕ್ಷಾರಂ ಜಾತಂ||
ಈಶಾನಾದಾಕಾಶಃ ತಸ್ಮಾತ್ ಶಾಂತ್ಯತೀತಾ
ತಸ್ಯಾಶ್ಚಿತ್ರವರ್ಣಾ ಸುಮನಾ
ತಸ್ಯಾಃ ಗೋಮಯೇನ ರಕ್ಷಾ ಜಾತಾ||''
ವಿಭೂತಿರ್ಭಸಿತಂ ಭಸ್ಮ | ಕ್ಷಾರಂ ರಕ್ಷೇತಿ ಭಸ್ಮನಃ|
ಭವಂತಿ ಪಂಚನಾಮಾನಿ| ಪಂಚಭಿರ್ನಾಮಭಿರ್ಭೃಶಮ್||''
ಐಶ್ವರ್ಯಕಾರಣಾದ್ಭೂತಿರ್ಭಾಸನಾದ್ಭಸಿತಂ ತಥಾ
ಸರ್ವಾಘಭಕ್ಷಣಾದ್ಭಸ್ಮ ಆಪದಾಂ ಕ್ಷಾರಣಾತ್ ಕ್ಷಾರಂ
ಭೂತ-ಪ್ರೇತ-ಪಿಶಾಚ ಬ್ರಹ್ಮರಾಕ್ಷಸಾಪಸ್ಮಾರ
ಭವಭೀತಿಭ್ಯೋsಭಿರಕ್ಷಣಾತ್ ರಕ್ಷೇತಿ''
ಎಂದುದಾಗಿ,
ಇಂತಪ್ಪ ಶ್ರೀ ವಿಭೂತಿಯ ನಿರಂತರ
ಸಾವಧಾನಭಕ್ತಿಯಿಂದ
ನಾನು ಸರ್ವಾಂಗದಲ್ಲಿ ಧರಸಿ ಶುದ್ಧನಿರ್ಮಲ
ಪರಮಪವಿತ್ರ ಕಾಯನಾದೆನಯ್ಯ ಅಖಂಡೇಶ್ವರಾ.
Art
Manuscript
Music
Courtesy:
Transliteration
Saccidānanda paraśivana
sadyōjātamukhadinda
pr̥thvitattva puṭṭittu.
Ā tatvadinde nivr̥tti emba kale puṭṭittu.
Ā kaleyinde kapilavarṇada
nandiniyemba gōvu puṭṭittu.
Ā gōvina gōmayadinde
mahadaiśvaryavannuṇṭumāḍuvantha
bhūti emba vibhūti puṭṭittu.
Mattaṁ,
saccidānanda paraśivana vāmadēvamukhadinde
apputatva puṭṭittu.
Ā tatvadinde pratiṣṭheyemba kale puṭṭittu.
Ā kaleyinde kr̥ṣṇavarṇada
bhadreyemba gōvu puṭṭittu.
Ā gōvina gōmayadinde
Divyaprakāśadiṁ beḷaguvantha
bhasitavemba vibhūti puṭṭittu.
Mattaṁ,
saccidānanda paraśivana aghōramukhadinde
agnitatva puṭṭittu.
Ā tatvadinde vidyeyemba kale puṭṭittu.
Ā kaleyinde raktavarṇada surabhiyemba gōvu puṭṭittu.
Ā gōvina gōmayadinde samasta
pātakaṅgaḷa bhakṣisuvantha
bhasmavemba vibhūti puṭṭittu.
Mattaṁ,
saccidānanda paraśivana tatpuruṣamukhadinde
vāyutatva puṭṭittu.
Ā tatvadinde śāntiyemba kale puṭṭittu.
Ā kaleyinde śvētavarṇada
suśīleyemba gōvu puṭṭittu.
Ā gōvina gōmayadinde
sakala vyādhigaḷa keḍisuvantha
kṣāravemba vibhūti puṭṭittu.
Mattaṁ,
saccidānanda paraśivana īśān'yamukhadinde
ākāśatatva puṭṭittu.
Ā tatvadinde śāntyatītavemba kale puṭṭittu.
Ā kaleyinde citravarṇada
sumaneyemba gōvu puṭṭittu.
Ā gōvina gōmayadinde bhūta prēta piśāci
brahmarākṣasa cōra sarpa
vyāghrādigaḷa bhayava keḍisuva
rakṣeyemba vibhūti puṭṭittu.
Adentendoḍe: Jābālōpaniṣadi:
Sadyōjātāt pr̥thivī tasyāḥ nivr̥ttiḥ
tasyāḥ gōmayēna vibhūtirjātā ||
vāmadēvādudakaṁ tasmāt pratiṣṭhā
Tasyāḥ gōmayēna bhasitaṁ jātaṁ ||
aghōrād vahniḥ tasmāt vidyā
tasyāḥ raktavarṇā surabhī
tasyāḥ gōmayēna bhasma jātaṁ||
tatpuruṣād vāyuḥ tasmāt śāntiḥ
tasyāḥ śvētavarṇā suśīlā
tasyāḥ gōmayēna kṣāraṁ jātaṁ||
īśānādākāśaḥ tasmāt śāntyatītā
tasyāścitravarṇā sumanā
tasyāḥ gōmayēna rakṣā jātā||''
vibhūtirbhasitaṁ bhasma | kṣāraṁ rakṣēti bhasmanaḥ|
bhavanti pan̄canāmāni| pan̄cabhirnāmabhirbhr̥śam||''
aiśvaryakāraṇādbhūtirbhāsanādbhasitaṁ tathā
sarvāghabhakṣaṇādbhasma āpadāṁ kṣāraṇāt kṣāraṁBhūta-prēta-piśāca brahmarākṣasāpasmāra
bhavabhītibhyōsbhirakṣaṇāt rakṣēti''
endudāgi,
intappa śrī vibhūtiya nirantara
sāvadhānabhaktiyinda
nānu sarvāṅgadalli dharasi śud'dhanirmala
paramapavitra kāyanādenayya akhaṇḍēśvarā.