ಶ್ರೀ ವಿಭೂತಿಯ ಘನಮಹಿಮೆಯ ಹೇಳುವಡೆ
ಬ್ರಹ್ಮಂಗಸದಳ, ವಿಷ್ಣುವಿಂಗಸಾಧ್ಯ,
ರುದ್ರಂಗಗೋಚರ ನೋಡಾ!
ಅದೆಂತೆಂದೊಡೆ: ಮತ್ಸ್ಯಪುರಾಣ
ಬ್ರಹ್ಮಣಾ ವಿಷ್ಣುನಾ ಚಾಪಿ ರುದ್ರೇಣ ಚ ಮುನೀಶ್ವರೈಃ |
ಭಸ್ಮಧಾರಣಮಹಾತ್ಮ್ಯಂ ನ ಶಕ್ಯಂ ಪರಿಭಾಷಿತಮ್ || ''
ಎಂದುದಾಗಿ, ಇಂತಪ್ಪ ಶ್ರೀ ವಿಭೂತಿಯೆಂಬ
ಪರತರ ಪರಂಜ್ಯೋತಿಸ್ವರೂಪು ನೀವಾದಿರಾಗಿ
ಅಖಂಡೇಶ್ವರಾ, ಎನಗೆ ಶ್ರೀ ವಿಭೂತಿಯ
ಸರ್ವಸಿದ್ಧಿಯಯ್ಯಾ.
Art
Manuscript
Music
Courtesy:
Transliteration
Śrī vibhūtiya ghanamahimeya hēḷuvaḍe
brahmaṅgasadaḷa, viṣṇuviṅgasādhya,
rudraṅgagōcara nōḍā!
Adentendoḍe: Matsyapurāṇa
brahmaṇā viṣṇunā cāpi rudrēṇa ca munīśvaraiḥ |
bhasmadhāraṇamahātmyaṁ na śakyaṁ paribhāṣitam ||''
endudāgi, intappa śrī vibhūtiyemba
paratara paran̄jyōtisvarūpu nīvādirāgi
akhaṇḍēśvarā, enage śrī vibhūtiya
sarvasid'dhiyayyā.