Index   ವಚನ - 88    Search  
 
ಅನಂತಕೋಟಿ ಯಜ್ಞಂಗಳ ಮಾಡಿ ತೊಳಲಿ ಬಳಲಲದೇಕೊ? ಆ ಯಜ್ಞಂಗಳ ಫಲವು ರುದ್ರಾಕ್ಷಿಯ ಧರಿಸಿದಾಕ್ಷಣದಲ್ಲಿಯೇ ದೊರೆಕೊಂಬುದು ನೋಡಾ! ಅನಂತಕಾಲ ತಪವಮಾಡಿ ತೊಳಲಿ ಬಳಲಲದೇಕೊ? ಆ ತಪಸ್ಸಿನ ಫಲವು ರುದ್ರಾಕ್ಷಿಯ ಧರಿಸಿದಾಕ್ಷಣದಲ್ಲಿಯೇ ದೊರೆಕೊಂಬುದು ನೋಡಾ! ಅನಂತಕಾಲ ದಾನವಮಾಡಿ ತೊಳಲಿ ಬಳಲಲದೇಕೊ? ಆ ದಾನದ ಫಲವು ರುದ್ರಾಕ್ಷಿಯ ಧರಿಸಿದಾಕ್ಷಣದಲ್ಲಿಯೇ ದೊರೆಕೊಂಬುದು ನೋಡಾ! ಅನಂತಕಾಲ ವೇದಾಭ್ಯಾಸವಮಾಡಿ ತೊಳಲಿ ಬಳಲಲದೇಕೊ? ಆ ವೇದಾಭ್ಯಾಸದ ಫಲವು ರುದ್ರಾಕ್ಷಿಯ ಧರಿಸಿದಾಕ್ಷಣದಲ್ಲಿಯೇ ದೊರೆಕೊಂಬುದು ನೋಡಾ! ಅದೆಂತೆಂದೊಡೆ: ಪದ್ಮಪುರಾಣದಲ್ಲಿ- ಸರ್ವಯಜ್ಞತಪೋದಾನವೇದಾಭ್ಯಾಸೈಶ್ಚ ಯತ್ಫಲಮ್ | ತತ್ಫಲಂ ಲಭತೇ ಸದ್ಯೋ ರುದ್ರಾಕ್ಷಸ್ಯ ತು ಧಾರಣಾತ್ ||'' ಎಂದುದಾಗಿ, ಇಂತಪ್ಪ ರುದ್ರಾಕ್ಷಿಯ ಧರಿಸಿದ ಮಹಾತ್ಮನು ವಿಶ್ವಾಧಿಕನು ವಿಶ್ವಾತೀತನು ತಾನೇ ನೋಡಾ ಅಖಂಡೇಶ್ವರಾ.