ಏಳುಕೋಟಿ ಮಹಾಮಂತ್ರಗಳ
ಉಪಮಂತ್ರ ಕೋಟ್ಯಾನುಕೋಟಿಗಳ
ಕಲಿತು ತೊಳಲಿ ಬಳಲುವುದೇಕೋ?
ಭಾಳಾಕ್ಷನ ಮೂಲಮಂತ್ರ ಒಂದೇ ಸಾಲದೇ!
ಸಕಲವೇದಂಗಳ ಮೂಲವಿದು, ಸಕಲಶಾಸ್ತ್ರಂಗಳ ಸಾರವಿದು,
ಸಕಲಾಗಮಂಗಳ ಅರುಹಿದು, ಸಕಲಮಂತ್ರಂಗಳ ಮಾತೆಯಿದು.
ಇಂತಪ್ಪ ಶಿವಮಂತ್ರವೆಂಬ ಸಂಜೀವನವು ಎನ್ನಂಗಕ್ಕೆ ಸಂಗಿಸಲಾಗಿ
ಎನಗೆ ಮರಣದ ಭಯ ಹಿಂಗಿತಯ್ಯಾ ಅಖಂಡೇಶ್ವರಾ!
Art
Manuscript
Music
Courtesy:
Transliteration
Ēḷukōṭi mahāmantragaḷa
upamantra kōṭyānukōṭigaḷa
kalitu toḷali baḷaluvudēkō?
Bhāḷākṣana mūlamantra ondē sāladē!
Sakalavēdaṅgaḷa mūlavidu, sakalaśāstraṅgaḷa sāravidu,
sakalāgamaṅgaḷa aruhidu, sakalamantraṅgaḷa māteyidu.
Intappa śivamantravemba san̄jīvanavu ennaṅgakke saṅgisalāgi
enage maraṇada bhaya hiṅgitayyā akhaṇḍēśvarā!