Index   ವಚನ - 98    Search  
 
ಸಕಲವೇದಶಾಸ್ತ್ರಾಗಮ ಪುರಾಣಂಗಳೆಲ್ಲ ಶಿವಮಂತ್ರದಲ್ಲಿ ಜನಿಸಿದುವಯ್ಯ. ಸಕಲತತ್ವಶಕ್ತಿಮೂರ್ತಿಗಳೆಲ್ಲ ಶಿವಮಂತ್ರದಲ್ಲಿ ಜನಿಸಿದುವಯ್ಯ. ಸಕಲಭುವನ ಬ್ರಹ್ಮಾಂಡ ಸಚರಾಚರಂಗಳೆಲ್ಲ ಶಿವಮಂತ್ರದಲ್ಲಿಯೇ ಜನಿಸಿದುವಯ್ಯ. ವೃಕ್ಷಬೀಜನ್ಯಾಯದಂತೆ ಸಕಲವಿಸ್ತಾರವನೊಳಗೊಂಡಿರ್ಪ ಪರಮ ಶಿವಮಂತ್ರವ ನೆನೆನೆನೆದು ಎನ್ನ ಮನದ ಮುಂದಣ ಮರವೆಯ ಹರಿದು ಭವಸಾಗರವ ದಾಂಟಿದೆನಯ್ಯ ಅಖಂಡೇಶ್ವರಾ.