Index   ವಚನ - 101    Search  
 
ಶಿವಶಿವಾ ಎಂದು ಶಿವನ ಕೊಂಡಾಡಿ ಭವಪಾಶವ ಹರಿದೆನಯ್ಯ. ಹರಹರಾ ಎಂದು ಹರನ ಕೊಂಡಾಡಿ ಹರಗಣತಿಂಥಿಣಿಯೊಳಗೆ ನಿಂದೆನಯ್ಯ. ಇದು ಕಾರಣ ಹರಾಯ ಶಿವಾಯ ಶ್ರೀ ಮಹಾದೇವಾಯ ಓಂ ನಮಃಶಿವಾಯ ಎಂದೆನುತಿರ್ದೆನಯ್ಯ ಅಖಂಡೇಶ್ವರಾ.