Index   ವಚನ - 100    Search  
 
ನಾಲ್ಕು ವರ್ಣ ಹದಿನೆಂಟು ಜಾತಿ ನೂರೊಂದು ಕುಲದಲ್ಲಿ ಹುಟ್ಟಿದವನಾದಡಾಗಲಿ, ಅಧಮನಾದಡಾಗಲಿ, ಮೂರ್ಖನಾದಡಾಗಲಿ, ವಿದ್ವಾಂಸನಾದಡಾಗಲಿ, ಚಿದ್‍ರೂಪ ಶಿವಮಂತ್ರವನು ಶುದ್ಧಸಾವಧಾನದಿಂದೆ ಸ್ಮರಿಸಲು ಹೊದ್ದಿರ್ದ ಪಾಪದ ಪಡೆಯೆಲ್ಲ ಬಿದ್ದೋಡಿ ಹೋಗುವದು ನೋಡಾ. ಅದೆಂತೆಂದೊಡೆ: ಅಂತ್ಯಜೋವಾಧಮೋ ವಾಪಿ ಮೂರ್ಖೋ ವಾ ಪಂಡಿತೋsಪಿ ವಾ | ಜಪೇತ್ ಪಂಚಾಕ್ಷರೀಂ ವಿದ್ಯಾಂ ಜಪತಃ ಪ್ರಾಪ್ನು ಯಾಚ್ಛಿವಂ ||'' ಎಂದುದಾಗಿ, ಇಂತಪ್ಪ ಪಂಚಾಕ್ಷರಿಯ ಮಹಿಮೆಯನೇನೆಂಬೆನಯ್ಯ ಅಖಂಡೇಶ್ವರಾ.