Index   ವಚನ - 103    Search  
 
`ಓಂ ನಮಃಶಿವಾಯ' ಎಂಬುದೇ ಎನಗೆ ಧರ್ಮ ನೋಡಾ! `ಓಂ ನಮಃಶಿವಾಯ' ಎಂಬುದೇ ಎನಗೆ ಅರ್ಥ ನೋಡಾ! `ಓಂ ನಮಃಶಿವಾಯ' ಎಂಬುದೇ ಎನಗೆ ಕಾಮ ನೋಡಾ! `ಓಂ ನಮಃಶಿವಾಯ' ಎಂಬುದೇ ಎನಗೆ ಮೋಕ್ಷ ನೋಡಾ! `ಓಂ ನಮಃಶಿವಾಯ' ಎಂಬುದೇ ಎನಗೆ ಸರ್ವಕಾರಣ ನೋಡಾ ಅಖಂಡೇಶ್ವರಾ.