Index   ವಚನ - 104    Search  
 
ಓಂಕಾರವೆಂಬ ಮರಕ್ಕೆ ಷಟ್‍ಕೃತಿಯೆಂಬ ಶಾಖೆ ಪಸರಿಸಿ, ಷಡಕ್ಷರಗಳೆಂಬ ತಳಿರು ಕೊನರಿ, ಷಟ್‍ಸ್ಥಲಗಳೆಂಬ ಕುಸುಮಂಗಳಾಗಿ, ಷಡುಲಿಂಗಂಗಳೆಂಬ ಮೋಕ್ಷದ ಮಧುರಫಲಂಗಳ ತಳೆದಿರ್ಪುದು ನೋಡಾ! ಇದನು ನಾನು ಶ್ರುತಿಗುರುವಚನಸ್ವಾನುಭಾವಂಗಳಿಂದರಿದು ಓಂಕಾರವೆಂಬ ವೃಕ್ಷವನೇರಿ 'ಓಂ ನಮಃಶಿವಾಯ' 'ಓಂ ನಮಃಶಿವಾಯ' 'ಓ ನಮಃಶಿವಾಯ' ಎಂದು ಆ ಷಡುಲಿಂಗಂಗಳೆಂಬ ಮೋಕ್ಷದ ಮಧುರಫಲಂಗಳನು ಸವಿದು ನಿತ್ಯತೃಪ್ತನಾದೆನಯ್ಯ ಅಖಂಡೇಶ್ವರಾ.