ಶಿವಶಿವಾ! ಶಿವಭಕ್ತನಿರ್ದ ಹಳ್ಳಿಯಾದಡಾಗಲಿ,
ಪಟ್ಟಣವಾದಡಾಗಲಿ ಹೊರಗೇರಿಯಾದಡಾಗಲಿ,
ಶ್ರೇಷ್ಠಭೂಮಿಯಾದಡಾಗಲಿ ಕನಿಷ್ಠಭೂಮಿಯಾದಡಾಗಲಿ,
ಆತನಿರ್ದ ಸ್ಥಾನವೇ ಶಿವಲೋಕವೆನಿಸಿತ್ತು.
ಆತನಿರ್ದ ಮನೆಯೇ ಶಿವಮಂದಿರವೆನಿಸಿತ್ತು.
ಆತನಿರ್ದ ದೇಶಕ್ಕೆ ಹಸಿವು ತೃಷೆ ದುರ್ಭಿಕ್ಷವಿಲ್ಲ.
ಆಧಿ ವ್ಯಾಧಿ ರೋಗ ರುಜೆ ವಿಪತ್ತುಗಳಿಲ್ಲ ನೋಡಾ!
ಅದೆಂತೆಂದೊಡೆ: ಲಿಂಗಪುರಾಣೇ-
ರುದ್ರಾಧ್ಯಾಯೀ ವಸೇದ್ಯಸ್ತು ಗ್ರಾಮೇ ವಾ ನಗರೇsಪಿ ವಾ |
ನ ತತ್ರ ಕ್ಷುತ್ ಪಿಪಾಸಾದ್ಯಾ ದುರ್ಭಿಕ್ಷಂ ವ್ಯಾಧಯೋsಪಿ ವಾ ||''
ಮತ್ತಂ,
ಚಾಂಡಾಲವಾಟಿಕಾಯಾಂ ಶಿವಭಕ್ತಃ ಸ್ಥಿತೋ ಯದಿ |
ತದ್ಭೂಮಿಃ ಶಿವಲೋಕಸ್ತು ತದ್ಗೃಹಂ ಶಿವಮಂದಿರಮ್ ||''
ಎಂದುದಾಗಿ, ಇಂತಪ್ಪ ಪರಮಶಿವಭಕ್ತನ ದರ್ಶನವು
ಪುಣ್ಯದಪುಂಜವು ನೋಡಾ ಅಖಂಡೇಶ್ವರಾ.
Art
Manuscript
Music
Courtesy:
Transliteration
Śivaśivā! Śivabhaktanirda haḷḷiyādaḍāgali,
paṭṭaṇavādaḍāgali horagēriyādaḍāgali,
śrēṣṭhabhūmiyādaḍāgali kaniṣṭhabhūmiyādaḍāgali,
ātanirda sthānavē śivalōkavenisittu.
Ātanirda maneyē śivamandiravenisittu.
Ātanirda dēśakke hasivu tr̥ṣe durbhikṣavilla.
Ādhi vyādhi rōga ruje vipattugaḷilla nōḍā!
Adentendoḍe: Liṅgapurāṇē-
rudrādhyāyī vasēdyastu grāmē vā nagarēspi vā |
Na tatra kṣut pipāsādyā durbhikṣaṁ vyādhayōspi vā ||''
mattaṁ,
cāṇḍālavāṭikāyāṁ śivabhaktaḥ sthitō yadi |
tadbhūmiḥ śivalōkastu tadgr̥haṁ śivamandiram ||''
endudāgi, intappa paramaśivabhaktana darśanavu
puṇyadapun̄javu nōḍā akhaṇḍēśvarā.