Index   ವಚನ - 112    Search  
 
ಸದ್ಭಕ್ತನಾದಾತನು ಸತ್ಪಾತ್ರದಾನಯುಕ್ತನಾಗಿರಬೇಕಲ್ಲದೆ ಅಪಾತ್ರದಾನವ ಮಾಡಲಾಗದು ನೋಡಾ. ಅಪಾತ್ರವೆಂದೊಡೆ: ನಾಲ್ಕು ವೇದವನೋದಿನ ಬ್ರಾಹ್ಮಣನಾದಡಾಗಲಿ, ಶಿವಭಕ್ತಿಯಿಲ್ಲದವಂಗೆ ಗೋದಾನ ಭೂದಾನ ಸುವರ್ಣದಾನ ಕನ್ನಿಕಾದಾನಂಗಳ ಕೊಟ್ಟರೆ ಮುಂದೆ ನರಕ ತಪ್ಪದು ನೋಡಾ. ಅದೆಂತೆಂದೊಡೆ: ಲಿಂಗಪುರಾಣೇ- ಚತುರ್ವೇದಧರೋ ವಿಪ್ರಃ ಶಿವಭಕ್ತಿವಿವರ್ಜಿತಃ | ತಸ್ಮೈ ಕಾಂಚನದಾನೇನ ದಾತಾರು ನರಕಂ ವ್ರಜೇತ್ ||'' ಎಂದುದಾಗಿ, ಅಪಾತ್ರದಾನ ನಾಯಕನರಕ ನೋಡಾ ಅಖಂಡೇಶ್ವರಾ