Index   ವಚನ - 120    Search  
 
ಇಂದು ನಾಳೆಯೆಂಬ ಮಂದಬುದ್ಧಿಗೆ ಸಂದುಗೊಡದಿರಣ್ಣಾ. ಅನಿತ್ಯಕಾಲವನರಿದು ಶ್ರೀ ಮಹಾದೇವನ ಪೂಜಿಸಿರಣ್ಣಾ. ನೀರುಗುಳ್ಳೆಯಂತೆ ತೋರಿ ಅಡಗುವ ಅನಿತ್ಯಶರೀರದ ಭೋಗವು ನಿತ್ಯವೆಂದು ನಚ್ಚಿ ಹೊತ್ತುಗಳೆದು ವ್ಯರ್ಥವಾಗಿ ಸತ್ತುಹೋಗದಿರಣ್ಣಾ. ಕರ್ತೃ ಗುರುಲಿಂಗಜಂಗಮಕ್ಕೆ ಅರ್ಥಪ್ರಾಣಾಭಿಮಾನಂಗಳ ಸವೆಸಿ ನಿತ್ಯಪದವ ಸಾಧಿಸಿರಣ್ಣ ನಮ್ಮ ಅಖಂಡೇಶ್ವರಲಿಂಗದಲ್ಲಿ.