Index   ವಚನ - 122    Search  
 
ಮಡದಿ ಮಕ್ಕಳು, ಪಡೆದ ದ್ರವ್ಯವು ಎನ್ನೊಡವೆ ಎಂದು ನಚ್ಚಬೇಡಿರೋ ಎಲೆ ಹುಚ್ಚು ಮಾನವರಿರಾ! ಅವು ನಿಮ್ಮೊಡವೆಯಾದರೆ, ನೀವು ಮಡಿದು ಹೋಗುವಾಗ ನಿಮ್ಮೊಡನೆ ಬಪ್ಪವೇ ಹೇಳಿರೋ? ಅಸ್ಥಿರ ಜೀವನಂ ಲೋಕೇ ಅಸ್ಥಿರಂ ಧನಯೌವನಂ | ಅಸ್ಥಿರಾಃ ಪುತ್ರಧಾರಾಶ್ಚ ಸತ್ಯಧರ್ಮಃ ಪುನಃ ಸ್ಥಿರಃ||'' ಇದನರಿತು ತಡೆಯದೆ ಮೃಡನ ಸೇವೆಯ ಮಾಡಿದರೆ ಕಡೆ ಮೊದಲಿಲ್ಲದ ಪದವು ದೊರೆಕೊಂಬುದು ನೋಡಿರೋ ನಮ್ಮ ಅಖಂಡೇಶ್ವರಲಿಂಗದಲ್ಲಿ.