Index   ವಚನ - 123    Search  
 
ಮಹೇಂದ್ರಜಾಲದಂತೆ ಕಣ್ಣಮುಂದೆ ಒಡ್ಡಿದ ಹುಸಿಯ ಸಂಸಾರದಲ್ಲಿಯೇ ಎಡ್ಡಾಗಬೇಡಿರೋ ಎಲೆ ಎಡ್ಡ ಪ್ರಾಣಿಗಳಿರಾ! ಅಡ್ಡದಾಸೆಗೆ ದುಡ್ಡಿನ ಲಾಭವ ಕಳೆವರೇ? ಗುರುಲಿಂಗಜಂಗಮದ ಸೇವೆಯ ತೊರೆದು ಸಂಸಾರದಲ್ಲಿ ಬೆರೆದರೆ ಮುಂದೆ ನರಕದಲ್ಲಿಕ್ಕುವ ನಮ್ಮ ಅಖಂಡೇಶ್ವರ.