ನಿಮ್ಮ ತೊತ್ತಿನ ತೊತ್ತು ಪಡಿದೊತ್ತೆಂದು
ಎನ್ನ ಕೈವಿಡಿದು ತಲೆದಡಹಿ ವರದಭಯಹಸ್ತವ ಕೊಟ್ಟು
ಮರ್ತ್ಯಲೋಕಕ್ಕೆ ಎನ್ನ ಕಳುಹಿದಿರಾಗಿ,
ನೀನೇ ಕರ್ತನು ನಾನೇ ಭೃತ್ಯನು;
ನೀನೇ ಒಡೆಯನು ನಾನೇ ಬಂಟನು;
ನೀನೇ ಆಳ್ದನು ನಾನೇ ಆಳು;
ನೀನೇ ದೇವನು ನಾನೇ ಭಕ್ತನಾಗಿ,
ನೀನು ಮಾಡೆಂದ ಮಣಿಹವ ಮಾಡುತಿರ್ಪೆನು;
ನೀನು ಬೇಡೆಂದ ಮಣಿಹವ ಬಿಡುತಿರ್ಪೆನು;
ನೀನು ಹೇಳಿದ ತೊತ್ತು ಸೇವೆಯ ಮಾಡುತಿಪ್ಪೆನಯ್ಯ
ಅಖಂಡೇಶ್ವರಾ.
Art
Manuscript
Music
Courtesy:
Transliteration
Nim'ma tottina tottu paḍidottendu
enna kaiviḍidu taledaḍahi varadabhayahastava koṭṭu
martyalōkakke enna kaḷuhidirāgi,
nīnē kartanu nānē bhr̥tyanu;
nīnē oḍeyanu nānē baṇṭanu;
nīnē āḷdanu nānē āḷu;
nīnē dēvanu nānē bhaktanāgi,
nīnu māḍenda maṇihava māḍutirpenu;
nīnu bēḍenda maṇihava biḍutirpenu;
nīnu hēḷida tottu sēveya māḍutippenayya
akhaṇḍēśvarā.