Index   ವಚನ - 149    Search  
 
ಜಂಗಮವ ಕಂಡು ವಂದನೆಯ ಮಾಡಿದರೆ ಮುಂದೆ ಭಕ್ತಿ ಮುಕ್ತಿ ಪುಣ್ಯದ ಫಲವು ದೊರೆಕೊಂಬುದು ನೋಡಾ! ಜಂಗಮವ ಕಂಡು ನಿಂದೆಯ ಮಾಡಿದರೆ ಮುಂದೆ ಬಂಧನಕ್ಕೊಳಗಪ್ಪುದು ತಪ್ಪದು ನೋಡಾ ಅಖಂಡೇಶ್ವರಾ.