Index   ವಚನ - 150    Search  
 
ಜಂಗಮವೇ ಜಗದೀಶನೆಂದು ನಂಬದವನ ಜನ್ಮವ ಸುಡುಸುಡು! ಜಂಗಮವೇ ಜಗಭರಿತನೆಂದು ನಂಬದವನ ಜನ್ಮ ವ್ಯರ್ಥಜನ್ಮ! ಜಂಗಮವೇ ಶಿವನೆಂದು ನಂಬದವನ ಮನೆ ಸುಡುಗಾಡು ನೋಡಾ ಅಖಂಡೇಶ್ವರಾ.