Index   ವಚನ - 165    Search  
 
ನೀನೊಲಿದಡೆ ಜಗವೆಲ್ಲ ಕೊಂಡಾಡುತಿರ್ಪುದು ನೋಡಾ; ನೀನೊಲಿಯದಿರ್ದಡೆ ಜಗವೆಲ್ಲ ಹೊತ್ತುಗಲ್ಲ ಹೊತ್ತಿರ್ಪುದು ನೋಡಾ, ನೀನೊಲಿದಡೆ ವೈರಿಗಳೆಲ್ಲ ಸಖರಪ್ಪರು ನೋಡಾ; ನೀನೊಲಿಯದಿರ್ದಡೆ ಸಖರೆಲ್ಲ ವೈರಿಗಳಹರು ನೋಡಾ, ನೀನೊಲಿದಡೆ ಬಾರದ ಪದಾರ್ಥ ಬಪ್ಪುದು ನೋಡಾ; ನೀನೊಲಿಯದಿರ್ದಡೆ ಬರ್ಪುದು ಬಾರದೆ ಹೋಹುದು ನೋಡಾ; ಇದು ಕಾರಣ, ನಿಮ್ಮ ಒಲುಮೆಯಿಂದ ಘನವು ಆವುದು ಇಲ್ಲ ನೋಡಾ ಅಖಂಡೇಶ್ವರಾ.