Index   ವಚನ - 178    Search  
 
ಸದ್ ಭಕ್ತರೇ ಎನ್ನ ತಂದೆ ತಾಯಿಗಳಯ್ಯ. ಸದ್ ಭಕ್ತರೇ ಎನ್ನ ಬಂಧು ಬಳಗವಯ್ಯ. ಸದ್ ಭಕ್ತರೇ ತಮ್ಮ ಒಕ್ಕುಮಿಕ್ಕುದನಿಕ್ಕಿ ಸಲಹಿದರಾಗಿ ಅಖಂಡೇಶ್ವರಾ, ನಾ ನಿಮ್ಮ ಕಡೆಯ ಬಾಗಿಲ ಕಾಯ್ವುದಕೆ ಯೋಗ್ಯನಾದೆನಯ್ಯ.