Index   ವಚನ - 179    Search  
 
ಸತ್ಯದ ಮನೆಯಲ್ಲಿ ಶಿವನಿರ್ಪನಲ್ಲದೆ ಅಸತ್ಯದ ಮನೆಯಲ್ಲಿ ಶಿವನಿರ್ಪನೆ? ಇಲ್ಲಿಲ್ಲ ನೋಡಿರೊ. ಇದು ಕಾರಣ, ನಮ್ಮ ಅಖಂಡೇಶ್ವರಲಿಂಗವನೊಲಿಸಬೇಕಾದಡೆ ಸತ್ಯವ ಸಾಧಿಸಬೇಕು ಕಾಣಿರೋ.