ಅರ್ಥ ಗುರುವಿನಲ್ಲಿ ಸವೆದು,
ಪ್ರಾಣ ಲಿಂಗದಲ್ಲಿ ಸವೆದು,
ಅಭಿಮಾನ ಜಂಗಮದಲ್ಲಿ ಸವೆದು,
ಆ ಗುರುಲಿಂಗಜಂಗಮವೇ
ತನ್ನ ಪ್ರಾಣವೆಂದು ತಿಳಿಯಬಲ್ಲಾತನೇ
ಸದ್ ಭಕ್ತ ನೋಡಾ ಅಖಂಡೇಶ್ವರಾ.
Art
Manuscript
Music
Courtesy:
Transliteration
Artha guruvinalli savedu,
prāṇa liṅgadalli savedu,
abhimāna jaṅgamadalli savedu,
ā guruliṅgajaṅgamavē
tanna prāṇavendu tiḷiyaballātanē
sad bhakta nōḍā akhaṇḍēśvarā.