Index   ವಚನ - 189    Search  
 
ಸ್ನೇಹ ಸಮರಸ ಮೋಹವಿರಬೇಕು ಗುರುವಿನಲ್ಲಿ. ಸ್ನೇಹ ಸಮರಸ ಮೋಹವಿರಬೇಕು ಲಿಂಗದಲ್ಲಿ. ಸ್ನೇಹ ಸಮರಸ ಮೋಹವಿರಬೇಕು ಜಂಗಮದಲ್ಲಿ. ಸ್ನೇಹ ಸಮರಸ ಮೋಹವಿರಬೇಕು ಪಾದೋದಕ ಪ್ರಸಾದದಲ್ಲಿ. ಸ್ನೇಹ ಸಮರಸ ಮೋಹವಿರಬೇಕು ಶರಣಜನ ಶಿವಭಕ್ತರಲ್ಲಿ. ಇಂತಿವರಲ್ಲಿ ಸ್ನೇಹಸಮರಸ ಮೋಹವನುಳ್ಳ ಸದ್ ಭಕ್ತರ ತೋರಿ ಬದುಕಿಸಯ್ಯ ಎನ್ನ ಅಖಂಡೇಶ್ವರಾ.