Index   ವಚನ - 194    Search  
 
ತನುವೆ ಗುರುವೆಂದರಿದ ಬಳಿಕ ಬಿಡದೆ ಗುರುಭಕ್ತಿಯ ಮಾಡಲೇಬೇಕು. ಮನವೆ ಲಿಂಗವೆಂದರಿದ ಬಳಿಕ ಬಿಡದೆ ಲಿಂಗಪೂಜೆಯ ಮಾಡಲೇಬೇಕು. ಧನವೆ ಜಂಗಮವೆಂದರಿದ ಬಳಿಕ ಬಿಡದೆ ಜಂಗಮಕ್ಕೆ ಬೇಡಿದ ಪದಾರ್ಥವನೀಯಲೇಬೇಕು. ಇಂತಪ್ಪ ಸದ್ ಭಕ್ತನ ತೋರಿ ಬದುಕಿಸಯ್ಯ ಎನ್ನ ಅಖಂಡೇಶ್ವರಾ.